ಕಾವ್ಯ ಮುತ್ತು !
ಪ್ರೀತಿಯ ಕಿಶು
ಇದೋ ನಿನಗೊಂದು ಕಾವ್ಯ ಮುತ್ತು !
ಒಡಲಾಳದ ಪ್ರೇಮ ಮುತ್ತು !
ಎನ್ನೆದೆಯ ಸಂಬ್ರಮಕೆ ತಳಿರು ಕಟ್ಟಿದ ಚಿನ್ನ ನೀನು !
ಬರಡು ಬದುಕಿಗೆ ಅರ್ಥ ತಂದ
ಜೀವ ಸೆಲೆ ನೀನು !
ಹೊಸ ಕನಸುಗಳಿಗೆ ಬಣ್ಣ ಹಚ್ಹಿದ
ಸ್ಪೂರ್ತಿ ನೀನು !
ಹಳೆಯ ಬಾಲ್ಯದ ನೆನಪ ಕಾಡಿದ
ಪೋರ ನೀನು !
ಪ್ರೀತಿ ಕಾವ್ಯ ಹುಟ್ಟಿಸಿದ ಕಿಶೋರ ನೀನು !
ಮತ್ತೆ ಹರಸಿ ಹುಟ್ಟಿಬಂದ ಶ್ರೀಕೃಷ್ಣ ನೀನು !.
ನನ್ನ ಹೊಸ ಜೀವ ನೀನು !
Saturday, September 4, 2010
ಮತ್ತೆ ಹುಟ್ಟುತಿವೆ ಕಾವ್ಯಗಳು !
ಹೇ !.
ಮತ್ತೆ ಹುಟ್ಟುತಿವೆ ಕಾವ್ಯಗಳು
ಬಹು ದಿನಗಳ ನಂತರ
ಹೊಸ ಭಾವಗಳೊಂದಿಗೆ
ಹೊಸ ಜೀವಗಳೊಂದಿಗೆ
ಹೊಸ ಕನಸುಗಳೊಂದಿಗೆ
ಹೊಸ ಬದುಕಿಗಾಗಿ !
ಅಂದು ಎಲ್ಲೊ ಕಳೆದುಹೋಗಿದ್ದವು ಈ ಕಾವ್ಯಗಳು !
ಮತ್ತೆ ಮರೆತೆಹೊಗಿದ್ದವು ನನಗೆ
ನಡುವೆ ಹುಡುಕಿದರೂ ಸಿಕ್ಕಿರಲಿಲ್ಲ
ಅಂದಹಾಗೆ ಇದೀಗ ಮತ್ತೆ ಬಂದಿವೆ
ಅದೇ ಕಾವ್ಯಗಳು ಆಕಸ್ಮಿಕವಾಗಿ !
ನನ್ನೇ ಹುಡುಕುತ್ತಾ ?.
ನನಗಾಗಿ ನನ್ನ ನೆನಪಿಗಾಗಿ
ವಯಸ್ಸು ಮಾಗಿ !.
ಹೇ !.
ಮತ್ತೆ ಹುಟ್ಟುತಿವೆ ಕಾವ್ಯಗಳು
ಬಹು ದಿನಗಳ ನಂತರ
ಹೊಸ ಭಾವಗಳೊಂದಿಗೆ
ಹೊಸ ಜೀವಗಳೊಂದಿಗೆ
ಹೊಸ ಕನಸುಗಳೊಂದಿಗೆ
ಹೊಸ ಬದುಕಿಗಾಗಿ !
ಅಂದು ಎಲ್ಲೊ ಕಳೆದುಹೋಗಿದ್ದವು ಈ ಕಾವ್ಯಗಳು !
ಮತ್ತೆ ಮರೆತೆಹೊಗಿದ್ದವು ನನಗೆ
ನಡುವೆ ಹುಡುಕಿದರೂ ಸಿಕ್ಕಿರಲಿಲ್ಲ
ಅಂದಹಾಗೆ ಇದೀಗ ಮತ್ತೆ ಬಂದಿವೆ
ಅದೇ ಕಾವ್ಯಗಳು ಆಕಸ್ಮಿಕವಾಗಿ !
ನನ್ನೇ ಹುಡುಕುತ್ತಾ ?.
ನನಗಾಗಿ ನನ್ನ ನೆನಪಿಗಾಗಿ
ವಯಸ್ಸು ಮಾಗಿ !.
Subscribe to:
Posts (Atom)